ಮೈಸೂರು

500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿರುವುದು ಅದ್ಭುತ ಕಾರ್ಯ: ಭಾಮಿ ವಿ.ಶೆಣೈ

ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಪ್ಪುಹಣ ತಟೆಗಟ್ಟುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು 500, 1000 ರು. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿ ಅದ್ಭುತ ಕೆಲಸ ಮಾಡಿದ್ದಾರೆ ಎಂದು ಮೈಸೂರು ಗ್ರಾಹಕರ ಪರಿಷತ್‌ನ ಭಾಮಿ ವಿ.ಶೆಣೈ ಅಭಿಪ್ರಾಯಪಟ್ಟರು.

ಬುಧವಾರ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಲ್ಲಿ ಆಯೋಜಿಸಿದ್ದ “ಭ್ರಷ್ಟಾಚಾರ ನಿಗ್ರಹದಲ್ಲಿ ನಾಗರಿಕರ ಪಾತ್ರ” ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, 1978ರಲ್ಲಿ 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ರದ್ದು ಮಾಡಲಾಗಿತ್ತಾದರೂ ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯವಾಗಲಿಲ್ಲ. ಅಂದು ಆಗದ ಕೆಲಸವನ್ನು ಮೋದಿ ಇಂದು ಮಾಡಲು ಹೊರಟಿದ್ದಾರೆ. ಆದರೆ, ಹೆಚ್ಚು ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸುವುದರಿಂದ ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯವಿಲ್ಲ. 2000 ರು. ಮುಖಬೆಲೆಯ ನೋಟುಗಳ ಮುದ್ರಣದಿಂದ ಲಂಚ ನೀಡುವವರಿಗೆ ಉಪಯೋಗವೇ ಆಗುತ್ತದೆ. ಹಾಗಾಗಿ ಮಿತವಾಗಿ, ಬೇಡಿಕೆಗೆ ತಕ್ಕಂತೆ ನೋಟು ಮುದ್ರಣ ಮಾಡುವುದರಿಂದ ಭ್ರಷ್ಟಾಚಾರ ತಡೆಗಟ್ಟಬಹುದು ಎಂದು ತಿಳಿಸಿದರು.

ನಮ್ಮ ದೈನದಿಂದ ವ್ಯವಹಾರಗಳಲ್ಲಿ ಶೇ. 84ರಷ್ಟು ಐನೂರು, ಸಾವಿರ ರು. ನೋಟುಗಳನ್ನು ಬಳಸುತ್ತೇವೆ. ಉಳಿದ 14 ರಷ್ಟು ನೂರು, ಐವತ್ತು, ಇಪ್ಪತ್ತು ಹಾಗೂ ಹತ್ತು ರು. ನೋಟುಗಳನ್ನು ಬಳಸುತ್ತೇವೆ.

ಭಾರತದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯವಾಗಲಿಲ್ಲ

ನಾನು ಜಾರ್ಜಿಯಾ, ಟರ್ಕಿಸ್ತಾನ, ಕಜಿಕಿಸ್ತಾನ, ಗಾನಾ, ಪೆರು, ಮೆಕ್ಸಿಕೋ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಹೋರಾಡಿ ಅಲ್ಪಮಟ್ಟಿನ ಯಶಸ್ಸನ್ನಾದರೂ ಕಂಡಿದ್ದೇನೆ. ಆದರೆ, ಭಾರತದಲ್ಲಿ ಕಳೆದ 27 ವರ್ಷಗಳಿಂದಲೂ ಭ್ರಷ್ಟಾಚಾರ ನಿಗ್ರಹಕ್ಕೆ ಹೋರಾಡುತ್ತಿದ್ದರೂ ಯಾವ ಪ್ರಯೋಜನ ಆಗುತ್ತಿಲ್ಲ. ಕಳೆದೊಂದು ವರ್ಷದಲ್ಲಿ ಲಂಚ ನೀಡಿರುವ 30 ಸಾವಿರ ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿದ್ದು, ಶೇ.43ರಷ್ಟು ಜನ ಲಂಚ ನೀಡಿರುವುದಾಗಿ ತಿಳಿಸಿದ್ದು ಅದರಲ್ಲಿ ಶೇ.20ರಷ್ಟು ಜನ ಹಲವು ಬಾರಿ ಲಂಚ ನೀಡಿದ್ದರೆ, 23ರಷ್ಟು ಒಂದು ಬಾರಿ ನೀಡಿರುವುದಾಗಿ ತಿಳಿಸಿದ್ದ, 35ರಷ್ಟು ಜನ ಲಂಚ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ ಎಂದರು.

ಲಂಚ ನೀಡಿದವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು

ಆಸ್ತಿ ಮಾರಾಟದ ವೇಳೆ ಲಂಚ ನೀಡಿದವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು. ಸಬ್‌ ರಿಜಿಸ್ಟ್ರಾರ್, ಆರ್‌ಟಿಓ, ಮುನಿಸಿಪಲ್ ಕಚೇರಿಗಳಲ್ಲಿ, ಎಲೆಕ್ಟ್ರಿಸಿಟಿ ವ್ಯವಹಾರಗಳಲ್ಲಿ ಅವ್ಯಾಹತವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಪೊಲೀಸರು ಹೆಲ್ಮೆಟ್ ಧರಿಸದಿದ್ದವರ ಬಳಿ ಲಂಚ ಪಡೆಯುತ್ತಾರೆ. ಮಧ್ಯವರ್ತಿಗಳಿಂದ ಭ್ರಷ್ಟಾಚಾರ ಹೆಚ್ಚಳವಾಗುತ್ತಿದ್ದು ಪಡಿತರ ಹಾಗೂ ಎಲ್‌ಪಿಜಿ ಗ್ಯಾಸ್‌ನಿಂದಲೇ ವರ್ಷಕ್ಕೆ 50 ಸಾವಿರ ಕೋಟಿ ಕಪ್ಪುಹಣ ಸೃಷ್ಟಿಯಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಮಧ್ಯವರ್ತಿಗಳ ಮೂಲಕ ಹಣ ನೀಡದೆ ನೇರವಾಗಿ ಪಾವತಿಸುವುದರಿಂದ ಭ್ರಷ್ಟಾಚಾರವನ್ನು ತಡೆಗಟ್ಟಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಪತಿ ಡಾ. ಸರ್ವಮಂಗಳಾ ಶಂಕರ್, ಕುಲಸಚಿವ ಡಾ. ನಿರಂಜನ ಉಪಸ್ಥಿತರಿದ್ದರು.

Leave a Reply

comments

Related Articles

error: