ಪ್ರಮುಖ ಸುದ್ದಿಮೈಸೂರು

ಮುಖ್ಯಮಂತ್ರಿಗಳು ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ : ಕೆ.ಎಸ್.ಈಶ್ವರಪ್ಪ

ಮೈಸೂರು,ನ.2:- ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದ ಪ್ರಧಾನಿಯ ಕುರಿತು ಹಗುರವಾಗಿ ಮಾತನಾಡಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ನನ್ನ ಕಂಡರೆ ಮೋದಿಗೆ ಭಯ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿಗಳು ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ.  ಆಕಾಶಕ್ಕೆ ಉಗಿದ ಉಗುಳು ತನ್ನ ಮೇಲೆ ಬೀಳೋದಿಲ್ಲ ಎಂದು ತಿಳಿದುಕೊಂಡಿದ್ದಾರೆ. ಅದು ಯಾವಾಗ ತಿರುಗಿ ಬೀಳುತ್ತದೆ ಕಾದು ನೋಡಿ ಎಂದು ತಿರುಗೇಟು ನೀಡಿದ್ದಾರೆ.

ವಿಜಯಶಂಕರ್ ಬಿಜೆಪಿ ಪಕ್ಷ ತೊರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ  ಯಾವ ಕಾರಣಕ್ಕೆ ವಿಜಯಶಂಕರ್ ಪಕ್ಷ ಬಿಟ್ಟರೋ ನನಗೆ ಗೊತ್ತಿಲ್ಲ. ಪಕ್ಷ ವಿಜಯಶಂಕರ್ ಗೆ ಎಲ್ಲವನ್ನೂ ನೀಡಿತ್ತು. ಪಕ್ಷದ ಬಗ್ಗೆ ಮಾತನಾಡುವಾಗ ಎಲ್ಲಾ ಚೆನ್ನಾಗಿತ್ತ ಎಂದು ಪ್ರಶ್ನಿಸಿದ್ದಾರೆ. ನನ್ನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಅಂತಾರೆ. ಮುಂದಿನ ಚುನಾವಣೆಯಲ್ಲಿ ಮತದಾರ ತಕ್ಕ ಪಾಠ ಕಲಿಸಲಿದ್ದಾನೆ ಎಂದರು. ಉಪೇಂದ್ರ, ಅನುಪಮಾ ಶೆಣೈ ಹೊಸ ಪಕ್ಷ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ  ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪಕ್ಷ ಕಟ್ಟುವ ಅಧಿಕಾರವಿದೆ. ಅಂತಹ ಪಕ್ಷಗಳು ಎಷ್ಟು ಉಳಿಯಲಿವೆ ಎಂಬುದನ್ನು ಚುನಾವಣೆ  ಬಳಿಕ ಕಾದು ನೋಡಿ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: