ಕರ್ನಾಟಕಪ್ರಮುಖ ಸುದ್ದಿ

ಡಯಾಗ್ನೋಸ್ಟಿಕ್ ಸರ್ವಿಸಸ್ ಪ್ರಾರಂಭಿಸಲು ಟೆಂಡರ್ ನಿಯಮ ಬಾಹಿರ ಆರೋಪಕ್ಕೆ ಎಸಿಬಿಯಿಂದ ಕ್ಲೀನ್ ಚಿಟ್ : ಡಾ.ಯತೀಂದ್ರ ಸಿದ್ದರಾಮಯ್ಯಗೆ ರಿಲೀಫ್

ಬೆಂಗಳೂರು,ನ.2- ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಡಯಾಗ್ನೋಸ್ಟಿಕ್ ಸರ್ವಿಸಸ್ ಪ್ರಾರಂಭಿಸಲು ಟೆಂಡರ್ ಅನ್ನು ನಿಯಮ ಬಾಹಿರವಾಗಿ ನೀಡಲಾಗಿದೆ ಎಂಬ ವಿಚಾರವಾಗಿ ಮು‍ಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯಗೆ ಎಸಿಬಿಯಿಂದ ಕ್ಲೀನ್ ಚಿಟ್ ದೊರೆತಿದೆ. ಆ ಮೂಲಕ ಯತ್ರೀಂದ್ರ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಾಂತಾಗಿದೆ.

ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಸ್ವಸ್ತ ಸುರಕ್ಷಾ ಯೋಜನೆಯಡಿ ಡಯಾಗ್ನೋಸ್ಟಿಕ್ ಸರ್ವಿಸಸ್ ಅನ್ನು ಪ್ರಾರಂಭಿಸಲು ಟೆಂಡರ್ ಅನ್ನು ನಿಯಮ ಬಾಹಿರವಾಗಿ ನೀಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಎಸ್.ಭಾಸ್ಕರನ್ ಎಸಿಬಿಗೆ ದೂರು ನೀಡಿದ್ದರು. ವಿಚಾರಣೆ ಸಮಯದಲ್ಲಿ ಭಾಸ್ಕರನ್ ಅವರ ಆಪಾದನೆ ಸಾಬೀತಾಗದ ಕಾರಣ ದೂರು ಅರ್ಜಿಯ ವಿಚಾರಣೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಠಾಣೆ, ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕ ವಜೀರ್ ಅಲಿ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾಸ್ಕರನ್ ನೀಡಿರುವ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಎಸಿಬಿ ಪ್ರಕರಣ ಖುಲಾಸೆಗೊಳಿಸಿದೆ. ಎಸಿಬಿ ಧೋರಣೆಗೆ ಭಾಸ್ಕರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆ ಪಡೆಯದೆ ಎಸಿಬಿ ಪ್ರಕರಣಕ್ಕೆ ತಿಲಾಂಜಲಿ ಇಟ್ಟಿದೆ ಎಂದು ಆರೋಪಿಸಿರುವ ಭಾಸ್ಕರನ್ ಹೈಕೋರ್ಟ್ ನಲ್ಲಿ ಕಾನೂನು ಸಮರ ಆರಂಭಿಸಲು ನಿರ್ಧರಿಸಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: