ಮನರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲೂಸ್ ಮಾದ ಯೋಗಿ

ಬೆಂಗಳೂರು,ನ.2-ಸ್ಯಾಂಡಲ್ ವುಡ್ ನ ನಟ ಲೂಸ್ ಮಾದ ಯೋಗಿ ಮತ್ತು ಸಾಹಿತ್ಯ ಅವರು ಶಾಸ್ತ್ರೋಸ್ತವಾಗಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೋಣನಕುಂಟೆಯಲ್ಲಿರುವ ಶ್ರೀ ಕನ್ವೆಷನ್ ಹಾಲ್ ನಲ್ಲಿ ಯೋಗಿ ಮತ್ತು ಸಾಹಿತ್ಯ ಅವರ ಮದುವೆ ಗುರುವಾರ ಕುರುಬ ಮತ್ತು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.

ಈ ಸಂದರ್ಭದಲ್ಲಿ ಯೋಗಿ ಮತ್ತು ಸಾಹಿತ್ಯ ಕುಟುಂಬದವರು ಮತ್ತು ಬಂಧು ಮಿತ್ರರು ಹಾಜರಿದ್ದರು. ಚಿತ್ರರಂಗದ ಕಡೆಯಿಂದ ನಟ ಶಿವರಾಜ್​ ಕುಮಾರ್​ ಮದುವೆಗೆ ಬಂದು ನೂತನ ದಂಪತಿಗಳಿಗೆ ಶುಭ ಹಾರೈಸಿದರು.

ಇನ್ನು ಯೋಗಿ ಸಾಹಿತ್ಯ ನಿಶ್ಚಿತಾರ್ಥ ಜೂನ್ 11ಕ್ಕೆ ನಡೆದಿತ್ತು. ಕಳೆದ 13 ವರ್ಷಗಳಿಂದ ಸ್ನೇಹಿತರಾಗಿರುವ ಇವರು ಮನೆಯವರ ಸಮ್ಮತಿಯ ಮೇರೆಗೆ ಮದುವೆ ಆಗಿದ್ದಾರೆ. ಮೂಲತಃ ಐಟಿ ಉದ್ಯೋಗಿ ಆಗಿರುವ ಸಾಹಿತ್ಯಗೆ ಸಿನಿಮಾರಂಗಕ್ಕೆ ನಂಟು ಇಲ್ಲವೇ ಇಲ್ಲ. ಯೋಗಿಯ ಜೀವದ ಗೆಳತಿಯಾಗಿದ್ದ ಈಕೆ ಈಗ ಜೀವನದ ಸಂಗಾತಿ ಆಗಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: