ಕರ್ನಾಟಕ

ಜಿಲ್ಲಾ ನ್ಯಾಯಾಲಯ ಸ್ಥಾಪನೆ ಜಾಗಕ್ಕಾಗಿ ಅನಿರ್ದಿಷ್ಟಾವಧಿ ಕಾಲ ಪ್ರತಿಭಟನೆ

ರಾಜ್ಯ(ಯಾದಗಿರಿ)ನ.2:- ಯಾದಗಿರಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಬೇಕಾಗುವ ಜಾಗಕ್ಕಾಗಿ ಇಂದಿನಿಂದ‌ ಅನಿರ್ದಿಷ್ಟಾವಧಿ ಕಾಲ ವಕೀಲರು ಪ್ರತಿಭಟನೆ ಆರಂಭಿಸಿದ್ದಾರೆ.

ಜಿಲ್ಲಾ ನ್ಯಾಯಾಲಯ ಕಟ್ಟಡ ಸ್ಥಾಪನೆಗಾಗಿ ವಕೀಲರು ಒಟ್ಟು 22 ಎಕರೆ ಜಾಗದ ಬೇಡಿಕೆಯಿಟ್ಟು ಎಂಟು ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಆಗ ಮಧ್ಯೆ ಪ್ರವೇಶ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ 15 ಎಕರೆ ಜಾಗ ನೀಡುವುದಾಗಿ ಹೇಳಿದ್ದರು. ಆದರೂ ಕೂಡಾ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಕೀಲರು ಇಂದಿನಿಂದ ಕೋರ್ಟ್ ಕಲಾಪ ಬಹಿಷ್ಕಾರ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಕಲಾಪ ಬಹಿಷ್ಕಾರ ಮಾಡಿದ್ದರಿಂದ ಕಕ್ಷಿದಾರರು ಪರದಾಡುವಂತಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: