ಮೈಸೂರು

ರಿಯಲ್ ಎಸ್ಟೇಟ್ ಉದ್ಯಮಿ ಸಲ್ಮಾನ್ ಖಾನ್ ನಿಂದ ಜಮೀನು ಅತಿಕ್ರಮ : ಕ್ರಮಕ್ಕೆ ಆಗ್ರಹ

ಮೈಸೂರು,ನ.2 :  ನಗರದ ರಿಯಲ್ ಎಸ್ಟೇಟ್ ಉದ್ಯಮಿ ಸಲ್ಮಾನ್ ಖಾನ್ ಅವರು ದೌರ್ಜನ್ಯದ ಮೇಲೆ ನಮ್ಮ ಜಮೀನನ್ನು ಅತಿಕ್ರಮಿಸಿದ್ದು ಈ ಬಗ್ಗೆ ಪ್ರಶ್ನಿಸಿದರೆ ಹಲ್ಲೆ ಕೊಲೆ ಬೆದರಿಕೆಯೊಡ್ಡಿ ದೌರ್ಜನ್ಯವೆಸಗುತ್ತಿದ್ದಾರೆಂದು ಜಮೀನು ಮಾಲೀಕರಾದ ಕಸಬಾ ಹೋಬಳಿಯ ರವಿ ಹಾಗೂ ಚೌಡಯ್ಯ ಆರೋಪಿಸಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ, ಕಸಬಾ ಹೋಬಳಿಯ, ಬೆಳವಾಡಿ ಗ್ರಾಮದ ಸರ್ವೆ ನಂ. 182:1 ರಲ್ಲಿ 1.18 ಗುಂಟೆ ನಮ್ಮ ಜಮೀನನ್ನು ರಿಯಲ್ ಎಸ್ಟೇಟ್ ಉದ್ಯಮಿ  ಸಲ್ಮಾನ್ ಖಾನ್ ದಬ್ಬಾಳಿಕೆಯಿಂದ ಅತಿಕ್ರಮಿಸಿದ್ದಲ್ಲದೇ, ಸದ್ರಿ ಜಮೀನಿನಲ್ಲಿ ರಾತ್ರೋರಾತ್ರಿ ಕಟ್ಟಡವನ್ನು ನಿರ್ಮಿಸಿದ್ದು,  ಈ ಬಗ್ಗೆ ತಡೆಯೊಡ್ಡಿದ ನಮ್ಮ ಮೇಲೆ ಗೂಂಡಾಗಳ ಮೂಖಾಂತರ ಹಲ್ಲೆ ಯತ್ನಿಸಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ್ದು, ಜೀವ ಬೆದರಿಕೆಯಿಂದ  ಉಳುಮೆ ಮಾಡಲು ಸಾಧ್ಯವಿಲ್ಲವೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಸದ್ರಿ ಜಮೀನು ಪಿತ್ರಾರ್ಜಿತ ಬಳುವಳಿಯಾಗಿದೆ, ಕಷ್ಟಕಾಲದಲ್ಲಿ ಅಲ್ಪಸ್ವಲ್ಪ ಸಹಾಯ ಧನ ನೀಡಿದ ಉದ್ಯಮಿ ಸಲ್ಮಾನ್ ಅದನ್ನೇ ಬಂಡವಾಳವಾಗಿಸಿಕೊಂಡು ಸುಮಾರು 40 ರಿಂದ 50 ಲಕ್ಷ ರೂ ಬೆಲೆಬಾಳುವ ಭೂಮಿಯನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ, ರೌಡಿ ಶೀಟರ್ ಆಗಿರುವ ಸಲ್ಮಾನ್  ನಮ್ಮ ಮೇಲೆ ಸುಳ್ಳು ಕಳ್ಳತನ ಆರೋಪ ಹೊರಿಸಿ ಜೈಲಿಗಟ್ಟುವುದಾಗಿ ಬೆದರಿಕೆ ಹಾಕುತ್ತಿದ್ದರೆ ಅಲ್ಲದೇ ನಮ್ಮ ಜಮೀನಿನಲ್ಲಿ ನಿವೇಶನ ನಿರ್ಮಿಸಲು ಪೂರ್ವ ತಯಾರಿ ನಡೆಸಿದ್ದು ಈಗಾಗಲೇ 200 ಜನರಿಂದ ಬೇಡಿಕೆಯೂ ಬಂದಿದೆ. ದಬ್ಬಾಳಿಕೆ ಗೂಂಡಾವರ್ತನೆಯಿಂದ ಜಮೀನನ್ನು ಅತಿಕ್ರಮಿಸಿರುವ ಸಲ್ಮಾನ್ ಮೇಲೆ ಸೂಕ್ತ ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: