ಮೈಸೂರು

ನ.9-12 : ಮೈಸೂರು ಮೇಯರ್ ಗೋಲ್ಡ್ ಕಪ್ ಅಖಿಲ ಭಾರತ ಆಹ್ವಾನ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ಕಬ್ಬಡ್ಡಿ ಪಂದ್ಯಾವಳಿ

ಮೈಸೂರು,ನ.2:- ಮೈಸೂರು ಮೇಯರ್ ಗೋಲ್ಡ್ ಕಪ್ ಅಖಿಲ ಭಾರತ  ಆಹ್ವಾನ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ಕಬ್ಬಡ್ಡಿ ಪಂದ್ಯಾವಳಿಯನ್ನು ನ.9ರಿಂದ 12ರವರೆಗೆ ಆಯೋಜಿಸಲಾಗಿದೆ ಎಂದು ಮೇಯರ್ ಎಂ.ಜೆ.ರವಿಕುಮಾರ್ ತಿಳಿಸಿದರು.

ಪಾಲಿಕೆಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಾಮುಂಡಿವಿಹಾರ  ಒಳಾಂಗಣ ಕ್ರೀಡಾಂಗಣದಲ್ಲಿ ನ.9ರಿಂದ 12ರವರೆಗೆ ರಾಷ್ಟ್ರಮಟ್ಟದ ಆಹ್ವಾನಿತ ಪುರುಷರ ಮಹಿಳೆಯರ ಹೊನಲು ಬೆಳಕಿನ ಮೈಸೂರು ಮೇಯರ್ ಗೋಲ್ಡ್  ಕಪ್ ‘ಎ’ ಗ್ರೇಡ್ ಕಬ್ಬಡ್ಡಿ ಪಂದ್ಯಾವಳಿ ವೀಕ್ಷಣೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು. ಪುರುಷರ ವಿಭಾಗದಲ್ಲಿ ಮಹೇಂದ್ರ &ಮಹೇಂದ್ರ, ಹರಿಯಾಣ ಎಸ್.ಡಿ, ಹಿತೇಶ್ ಚೆನ್ನೈ, ಭರತ್ ಪೇಂಟರ್ಸ್, ಪಾಂಡಿಚೇರಿ, ಕೇರಳ, ವಿಜಯಬ್ಯಾಂಕ್, ಪೋಸ್ಟಲ್, ಹೆಚ್.ಎಂ.ಟಿ.ಕಾಲೋನಿ ಬಾಯ್ಸ್, ಬಿ.ವೈ.ಎಸ್, ಕ್ಲಾಸಿಕ್ ನ್ಯಾಷಿನಲ್ಸ್, ಆಳ್ವಾಸ್ ಡಿ.ಕೆ, ಕಸ್ಟಮ್ಸ್, ಮೈಸೂರು, ಮಂಡ್ಯ,ಯು.ಪಿ, ತಂಡಗಳು ಭಾಗವಹಿಸಲಿವೆ. ಮಹಿಳೆಯರ ತಂಡದಲ್ಲಿ ಬಾಂಬೆ, ಬಾಬಾ ಹರಿದಾಸ್, ಪಾಲಮ್ ಡೆಲ್ಲಿ, ಸೆಂಟ್ರಲ್ ರೈಲ್ವೆ ಬಾಂಬೆ, ಎಸ್.ಸಿ.ಆರ್ ಸಿಕಂದ್ರಾಬಾದ್, ದಿಂಡಿಗಲ್, ಶಕ್ತಿ ಟೈಲ್ಸ್, ಕೇರಳ, ಆಂಧ್ರ, ಬೆಸ್ಟ್ &ಕೋ, ಮಾತ, ಕೇಶವ, ಜೆ.ಕೆ.ಸಿ, ಆಳ್ವಾಸ್ ಡಿ.ಕೆ, ಮೈಸೂರು, ಕೆ.ಎಸ್.ಪಿ.ಬೆಂಗಳೂರು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆಯ ಸದಸ್ಯರಾದ ಸಂದೇಶ ಸ್ವಾಮಿ, ಮಲ್ಲೇಶ್, ಲಿಂಗಪ್ಪ, ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: