ಮೈಸೂರು

ಉತ್ಕೃಷ್ಟ ಕೃಷಿಗೆ ಬೀಜ ಸಂಸ್ಕರಣ ಉತ್ಪನ್ನ ‘ವಿಹಾನ್’ ಬಳಸಲು ಸಲಹೆ

ಮೈಸೂರು, ನ. 2 : ರೈತರು ಬಿತ್ತಿದ ಬೀಜ ಫಂಗಸ್ ಹಾಗೂ ಮಣ್ಣಿನಲ್ಲಿನ ನ್ಯೂನ್ಯತೆಗಳ ಕೊರತೆಯಿಂದ ಮೊಳೆ ಒಡೆಯುವ ಪ್ರಕ್ರಿಯೆ ನಡೆಯದೆ ನಷ್ಟವನ್ನುಂಟಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತಮ್ಮ ಕಂಪನಿಯು ಮುಂಬೈನ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರದ ತಂತ್ರಜ್ಞಾನದ ನೆರವಿನಿಂದ ವಿಹಾನ್ ಎಂಬ ಬೀಜ ಸಂಸ್ಕರಣ ಉತ್ಪನ್ನವನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ ಎಂದು ಕಂಪನಿಯ ಪೋನಾಲ್ಯಾಬ್ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಶೆಟ್ಟಿ ತಿಳಿಸಿದರು.

ಅವೈಜ್ಞಾನಿಕ ಬೀಜ ಪದ್ಧತಿಯೇ ಕೃಷಿಯಲ್ಲಿ ನಷ್ಟವುಂಟಾಗಲೂ ಶೇ.30ರಷ್ಟು ಕಾರಣವಾಗಿದ್ದು ತಮ್ಮ ಕಂಪನಿಯ ಉತ್ಪನ್ನವನ್ನು ಬಳಸಿದಲ್ಲಿ ಬೆಳೆಗಳಿಗೆ ಮಣ್ಣಿನ ಮೂಲಕ ಹರಡುವ ರೋಗಗಳಿಂದ ರಕ್ಷಿಸಬಹುದಾಗಿದೆ ಎಂದು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

5 ಗ್ರಾಮ್, 50 ಗ್ರಾಮ್, 200 ಗ್ರಾಮ್ ಪೊಟ್ಟಣಗಳಲ್ಲಿ ದೊರಕುವ ಈ ಬಯೋಪ್ರೈಮರ್ ಅನ್ನು ನೀರಿಗೆ ಬೆರೆಸಿ ಬಿತ್ತನೆ ಬೀಜಕ್ಕೆ ಲೇಪಿಸಿ ಒಣಗಿದ ನಂತರ ಬಿತ್ತಿದಲ್ಲಿ ಪರಿಣಾಮಕಾರಿಯಾಗಿ ಮೊಳಕೆಯೊಡೆದು ಹೆಚ್ಚಿನ ಇಳುವರಿ ಬರುವುದು ಎಂದು ತಿಳಿಸಿದರು.

Leave a Reply

comments

Related Articles

error: