ಮೈಸೂರು

ಅವೈಜ್ಞಾನಿಕ ಸಾರಿಗೆ ನೀತಿಯನ್ನು ಖಂಡಿಸಿ ನ.10 ರಿಂದ ರಾಜ್ಯಾದ್ಯಾಂತ ಲಾರಿ ಮುಷ್ಕರ

ಮೈಸೂರು, ನ.2 : ನೂತನ ಸಾರಿಗೆ ನೀತಿ, ವೇಗ ನಿಯಂತ್ರಕ ಅಳವಡಿಕೆ, ಅವೈಜ್ಞಾನಿಕ ಟೋಲ್ ವಸೂಲಾತಿ ಹಾಗೂ ಅಧಿಕಾರಿಗಳ ಕಿರುಕುಳ ಖಂಡಿಸಿ ನ.10ರಿಂದ ರಾಜ್ಯಾದ್ಯಂತ ಅನಿರ್ಧಿಷ್ಟವಧಿ ಲಾರಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಡಿಸ್ಟ್ರಿಕ್ಟ್ ಟ್ರಕ್ಕರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎನ್.ಶ್ರೀನಿವಾಸ ರಾವ್ ತಿಳಿಸಿದರು.

ಆರ್.ಟಿ.ಓ ಕಚೇರಿಗಳಲ್ಲಿ ವಾಹನ ನೋಂದಣಿ ಶಲ್ಕವೂ ಮೂರುಪಟ್ಟು ಹೆಚ್ಚಿದೆ, ಅಲ್ಲದೇ ಸ್ಪೀಡ್ ಗೌರನರ್  ಮಾಫಿಯ ಕಬಂಧ ಬಾಹುಗಳು ರಾಜ್ಯಾದ್ಯಂತ ಚಾಚಿದೆ ನೆರೆಯ ರಾಜ್ಯಗಳಲ್ಲಿ ಕೇವಲ 3 ಮತ್ತು 4 ಸಾವಿರಕ್ಕೆ ಲಭ್ಯವಾಗುವ ಉಪಕರಣವು ರಾಜ್ಯದಲ್ಲಿ 11 ಸಾವಿರ  ರೂಗಳನ್ನು ವಸೂಲಿ ಮಾಡಲಾಗುತ್ತಿದೆ, ಅಲ್ಲದೇ ಇತರೆ ರಾಜ್ಯಗಳಲ್ಲಿದಾ ಸಾರಿಗೆ ನೀತಿಯು ರಾಜ್ಯದಲ್ಲಿ ಅಳವಡಿಸಿದ್ದು ಇದರಿಂದ ಲಾರಿ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಬೇಸರಿಸಿ, ಅಲ್ಲದೇ ರಾಜ್ಯ ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಶುಲ್ಕ ವಸೂಲಿ ನಡೆಸಲಾಗುತ್ತಿದೆ ಹಾಗೂ 15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳಿಗೆ ಫಿಟ್ನೆಸ್ ನವೀಕರಸಲು ನೆಲಮಂಗಲದ ಆರ್.ಟಿ.ಒ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗಳು ನಿರ್ಮಿಸಿರುವ  ಕೇಂದ್ರದಲ್ಲಿ ತಪಾಸಣೆ ನಡೆಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು ಇದರಿಂದ ಹಳೆಯ ಲಾರಿ ಮಾಲೀಕರಿಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಕೃಷಿ ಮಾರುಕಟ್ಟೆಯಲ್ಲಿ ಹಮಾಲಿಗಳು ಅನ್ ಲೋಡ್ ಮಾಡಲು ಮಾಮೂಲಿ ಹೆಸರಿನಲ್ಲಿ ಬಲವಂತವಾಗಿ ವಸೂಲಾತಿ ನಡೆಸುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ವರಿಷ್ಠರಿಗೆ ಮನವಿ ಮಾಡಿದ್ದರು ಯಾವುದೇ ಕ್ರಮ ಜರುಗಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ, ಅಧಿಕಾರಿಗಳ ಕಿರುಕುಳದೊಂದಿಗೆ ಸಂಕಷ್ಟ ಸ್ಥಿತಿಯಲ್ಲಿಯೂ ಸಾವಿರಾರು ರೂಗಳ ತೆರಿಗೆ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಹಗಲು ದರೋಡೆಯಂತೆ ಹಲವಾರು ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಟೂರಿಸ್ಟ್ ಒನ್ ಅಸೋಸಿಯೇಷನ್ ಶಿವಸ್ವಾಮಿ, ಮೈಸೂರು ಡಿಸ್ಟ್ರಿಕ್ಟ್ ಟ್ರಕ್ಕರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ವಿಶ್ವನಾಥ್, ಉಪಾಧ್ಯಕ್ಷ ಮಹೇಶ್ , ರವಿ ಮೊದಲಾದವರು ಹಾಜರಿದ್ದರು ( ವರದಿ : ಕೆ.ಎಂ.ಆರ್)

Leave a Reply

comments

Related Articles

error: