ಮೈಸೂರು

`ಐ ಹೆಲ್ತ್ ಹಿರೋ’ ಪ್ರಶಸ್ತಿ ಪಡೆದ ಮೈಸೂರಿನ ಡಾ.ರವಿಶಂಕರ್, ಡಾ.ಉಮಾರವಿಶಂಕರ್

ಮೈಸೂರು,ನ.2-ದಿ ಇಂಟರ್ ನ್ಯಾಷನಲ್ ಏಜೆನ್ಸಿ ಆಫ್ ದಿ ಪ್ರಿವೆನ್ಷನ್ ಆಫ್ ಬ್ಲೈಂಡ್ ನೆಸ್ (ಐಎಪಿಬಿ) ಕೊಡಮಾಡುವ `ಐ ಹೆಲ್ತ್ ಹೀರೋ’ (ಅಂದತ್ವ ನಿವಾರಣೆಯ ಜಾಗತಿಕ ನಾಯಕ) ಎಂಬ ಪ್ರಶಸ್ತಿಗೆ ಮೈಸೂರಿನ ವೈದ್ಯ ದಂಪತಿಗಳಾದ ಡಾ.ರವಿಶಂಕರ್ ಹಾಗೂ ಡಾ.ಉಮಾ ರವಿಶಂಕರ್ ಪಾತ್ರರಾಗಿದ್ದಾರೆ.

ಅಂದತ್ವ ತಡೆಗಟ್ಟಲು ಶ್ರಮಿಸುವ ವೈದ್ಯರು, ಸ್ವಯಂಸೇವಾ ಸಂಸ್ಥೆಗಳು, ಧಾನಿಗಳನ್ನು ಗುರುತಿಸಿ ದಿ ಇಂಟರ್ ನ್ಯಾಷನಲ್ ಏಜೆನ್ಸಿ ಆಫ್ ದಿ ಪ್ರಿವೆನ್ಷನ್ ಆಫ್ ಬ್ಲೈಂಡ್ ನೆಸ್ (ಐಎಪಿಬಿ) ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಅದರಂತೆ ಉಷಾ ಕಿರಣ ಆಸ್ಪತ್ರೆಯ ಮೂಲಕ ಡಾ.ರವಿಶಂಕರ್, ಡಾ.ಉಮಾ ರವಿಶಂಕರ್ ನಡೆಸುತ್ತಿರುವ ಕಾರ್ಯಗಳನ್ನು ಗುರುತಿಸಿ ಅವರಿಗೆ ಈ ಪ್ರಸಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಕಠ್ಮಂಡುವಿನಲ್ಲಿ ನಡೆದ ಒಕ್ಕೂಟದ ವಿಶೇಷ ವಾರ್ಷಿಕ ಸಭೆಯಲ್ಲಿ ಡಾ.ಉಮಾ ರವಿಶಂಕರ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಇದು ನನ್ನ ವೈಯಕ್ತಿಕ ಸಾಧನೆಯಲ್ಲ. ಬದಲಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನನ್ನಂತಹ ನೂರಾರು ಭಾರತೀಯ ವೈದ್ಯರುಗಳಿಗೆ ಅವರ ಸಹಚರರಿಗೆ ಸಂದ ಗೌರವವಾಗಿದೆ. ಅಂದತ್ವ ನಿವಾರಣೆಯಲ್ಲಿ ವಿಷಯ ಜ್ಞಾನದ ಕೊರತೆ ಹಾಗೂ ಸಂಪನ್ಮೂಲದ ಕೊರತೆ ಪ್ರಮುಖ ಸವಾಲಾಗಿದೆ, ಇದನ್ನು ಸಮರ್ಪಕವಾಗಿ ಎದುರಿಸುವ ಉಮ್ಮಸ್ಸನ್ನು ಈ ಪ್ರಶಸ್ತಿ ನಮಗೆ ನೀಡಿದೆ ಎಂದರು.

ಏಷ್ಯಾದಲ್ಲಿ `ಐ ಹೆಲ್ತ್ ಹೀರೋ’ ಪ್ರಶಸ್ತಿಯನ್ನು ಪಡೆದಿರುವ ಮೊದಲ ಮಹಿಳೆಯಾಗಿಯೂ ಉಮಾರವಿಶಂಕರ್ ಗುರುತಿಸಿಕೊಂಡಿದ್ದಾರೆ. ಉಮಾರವಿಶಂಕರ್ ಅವರು 1 ಲಕ್ಷಕ್ಕೂ ಹೆಚ್ಚು ಕಣ್ಣಿನ ಶಸ್ತ್ರಚಿಕಿತ್ಸೆಗಳು ಮತ್ತು ವಿಧಾನಗಳನ್ನು ಮಾಡಿದ್ದಾರೆ. ಇದನ್ನು 2014 ರಲ್ಲಿ ಒಂದು ಔಟ್‍ರೀಚ್ ಸೇವೆ ಎಂದು ರೂಪಿಸಲಾಯಿತು. 1600 ಕ್ಕೂ ಹೆಚ್ಚು ಔಟ್‍ರೀಚ್ ಶಿಬಿರಗಳು, 5 ಲಕ್ಷ ಜನರ ಪರೀಕ್ಷೆ, 20000 ಜನರ ಶಸ್ತ್ರ ಚಿಕಿತ್ಸೆ, ಹೆಚ್ಚಿನವು ಕಣ್ಣು ಪೊರೆಗೆ, ಸಂಪೂರ್ಣ ಉಚಿತವಾಗಿ 500 ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

2013-14 ರಿಂದ ಶ್ರೀ ವಿವೇಕಾನಂದ ಸೇವಾಶ್ರಮದಲ್ಲಿ ಸೇವೆ ಸಮರ್ಪಿಸಿದ್ದಾರೆ. 1.75 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಸ್ಕ್ರೀನಿಂಗ್ (ಪರೀಕ್ಷೆ), ಆಸ್ಪತ್ರೆಯಲ್ಲಿ 18000 ಕ್ಕೂ ಹೆಚ್ಚು ಮಕ್ಕಳಿಗೆ ವಿವರವಾದ ಪರೀಕ್ಷೆ, 6500 ಕ್ಕೂ ಹೆಚ್ಚು ಮಕ್ಕಳಿಗೆ ಕನ್ನಡಕಗಳು, 200 ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಗಳು ಹಲವು ವಿಧವಾದ ಕಣ್ಣಿನ ರೋಗಗಳಿಂದ ಪೀಡಿತರಾದ ಮಕ್ಕಳಿಗೆ ಜನನ ಅಥವಾ ಚಿಕ್ಕ ವಯಸ್ಸಿನಲ್ಲಿ ಪೊರೆ, ಸಂಕುಚಿತ ಕಣ್ಣು,  ಕೆಳಗೆ ಜೋತು ಬೀಳುವ ಕಣ್ಣ ರೆಪ್ಪೆಗಳು, ನೀರು ತುಂಬಿದ ಕಣ್ಣುಗಳು, ಜನನ ಅಥವಾ ಚಿಕ್ಕ ವಯಸ್ಸಿನಲ್ಲಿ ಗ್ಲಾಕೋಮಾ ಮತ್ತು ಮಕ್ಕಳಿಗೆ ಬಹಳ ಅಪಾಯಕಾರಿಯಾದ ರೆಟಿನೋ ಬ್ಲಾಸ್ಟೋಮಾ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದ್ದಾರೆ. (ವರದಿ-ಎಚ್.ಎನ್, ಎಂ.ಎನ್)

 

 

Leave a Reply

comments

Related Articles

error: