ಲೈಫ್ & ಸ್ಟೈಲ್

ಕಡಲೆ ಹಿಟ್ಟು –ಜೇನುತುಪ್ಪ ಹೆಚ್ಚಿಸಲಿದೆ ಮುಖ ಕಾಂತಿ..!

ಮುಲ್ತಾನಿ ಮಿಟ್ಟಿ, ಮೊಸರು ಅಥವಾ ರೋಸ್ವಾಟರ್:
ಮುಲ್ತಾನಿ ಮಿಟ್ಟಿಗೆ ಬೇಕಾಗುವಷ್ಟು ಮೊಸರು ಅಥವಾ ರೋಸ್ವಾಟರ್ ನಿಂದ ಮಿಕ್ಸ್ ಮಾಡಿ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ ಸಂಪೂರ್ಣವಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಸಲ ಹೀಗೆ ಮಾಡುವುದರಿಂದ ಮುಖದಲ್ಲಿನ ಕಾಂತಿ ಹೆಚ್ಚಾಗುತ್ತದೆ.ಸಂಬಂಧಿತ ಚಿತ್ರ

ಕಿತ್ತಳೆ ಸಿಪ್ಪೆ, ಮೊಸರು, ಕಡಲೆಹಿಟ್ಟು:
ಒಣಗಿಸಿದ ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿ , ಕಡಲೆಹಿಟ್ಟು ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಫೇಸ್ಪ್ಯಾಕ್ ಹಾಕಿ 20 ನಿಮಿಷ ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆದು ರೋಸ್ವಾಟರ್ ಹಚ್ಚಿಕೊಳ್ಳಿ. ಈ ರೀತಿ ವಾರಕ್ಕೆ ಎರಡು ಬಾರಿ ಮಾಡುತ್ತಾ ಬಂದಲ್ಲಿ ವ್ಯತ್ಯಾಸ ಕಾಣುತ್ತದೆ.

ಕಡಲೇ ಹಿಟ್ಟು, ನಿಂಬೆ ರಸ, ಜೇನುತುಪ್ಪ:
ಕಡಲೇ ಹಿಟ್ಟಿಗೆ ಜೇನುತುಪ್ಪ, ಸ್ವಲ್ಪ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆಯ ಬಳಿಕ ಮುಖ ತೊಳೆದರೆ ಮುಖದಲ್ಲಿ ಪಿಂಪಲ್ ಕಡಿಮೆಯಾಗಿ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. multani mitti honny ಗೆ ಚಿತ್ರದ ಫಲಿತಾಂಶ

ಪುದೀನಾ, ಅರಿಶಿಣ:
ಪುದೀನಾ ಪೇಸ್ಟ್ ಗೆ ಸ್ಪಲ್ಪ ಅರಿಶಿಣ ಮಿಕ್ಸ್ ಮಾಡಿಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸ ಬೆರೆಸಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷದ ಬಳಿಕ ತೊಳೆಯಿರಿ. ಇದನ್ನ ನಿಯಮಿತವಾಗಿ ಬಳಸಿದರೆ ಮೊಡವೆ ಕಲೆ ಕೂಡ ಕಡಿಮೆಯಾಗುತ್ತದೆ.multani mitti ಗೆ ಚಿತ್ರದ ಫಲಿತಾಂಶ

ಸೌತೇಕಾಯಿ:
ಸೌತೇಕಾಯಿ ರಸಕ್ಕೆ ಸ್ಪಲ್ಪ ನಿಂಬೆರಸ ಬೆರೆಸಿ ಇದನ್ನು ಹತ್ತಿಯಲ್ಲಿ ತೆಗೆದುಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ಬಳಿಕ ಮುಖ ತೊಳೆಯಿರಿ. (ಪಿ.ಎಸ್)ಸಂಬಂಧಿತ ಚಿತ್ರ

Leave a Reply

comments

Related Articles

error: