ಮೈಸೂರು

ರಾಜೀವ್ ಗಾಂಧಿ ಆವಾಸ್ ಯೋಜನೆ ಆಶ್ರಯ ಮನೆಗಳ ವಿತರಣೆಗೆ ಆಗ್ರಹ

ಮೈಸೂರು, ನ.2 : ರಾಜೀವ್ ಗಾಂಧಿ ಆವಾಸ್ ಯೋಜನೆಯಡಿ ಆಶ್ರಯ ಮನೆಗಳನ್ನು ಮುಂದಿನ ವಿಧಾನಸಭಾ ಚುನಾವಣಾ ಪೂರ್ವದಲ್ಲಿಯೇ ವಿತರಿಸಬೇಕೆಂದು ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.

ನಗರದ ನರಸಿಂಹರಾಜ ಕ್ಷೇತ್ರದ ಬಡವರಿಂದ 2003-04ರಲ್ಲಿಯೇ ಅರ್ಜಿಯೊಂದಿಗೆ 10 ಸಾವಿರ ರೂಗಳ ಶುಲ್ಕವನ್ನು ಪಾಲಿಕೆಯು ಪಡೆದಿತ್ತು. ಶುಲ್ಕ ಪಡೆದು 13 ವರ್ಷಗಳೇ ಸಂದಿದರು ಇಂದಿಗೂ ನಿವೇಶನ ಹಾಗೂ ಮನೆಯನ್ನು ವಿತರಿಸಿಲ್ಲ, ಬಡವರಿಗೆ ಆ ಹಣ ಅತಿ ಹೆಚ್ಚು ಮೌಲ್ಯಯುತವಾಗಿದ್ದು ಸಾಲ ಸೂಲ ಮಾಡಿ ನೀಡಿದ್ದು ಸಾಲದ ಸುಳಿಯಲ್ಲಿ ಬಿದ್ದು ಸಂಕಷ್ಟ ಎದುರಿಸುವಂತಾಗಿದೆ ಎಂದು ಮಾಧ್ಯಮ ಕಾರ್ಯದರ್ಶಿ ಮಿರ್ಜಾ ಜೇಮಶೆಡ್ ಬೈಗ್ ಅಶ್ರಫ್ ದೂರಿದ್ದಾರೆ.

ಆದ್ದರಿಂದ ಸಿಎಂ. ಸಿದ್ದರಾಮಯ್ಯ, ಪೌರಾಡಳಿತ ಸಚಿವ ಈಶ್ವರ ಬಿ.ಖಂಡ್ರೆ, ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ತನ್ವೀರ್ ಸೇಟ್ ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಬಡ ಫಲಾನುಭವಿಗಳಿಗೆ ನಿವೇಶನ ಹಾಗೂ ಮನೆಗಳನ್ನು ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: