ಸುದ್ದಿ ಸಂಕ್ಷಿಪ್ತ

ಕೆಂಪು-ಹಳದಿ ದಿನಾಚರಣೆ

ಮೈಸೂರಿನ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ವಿದ್ಯಾಶಾಲೆಯ ನರ್ಸರಿ ವಿಭಾಗದ ಮಕ್ಕಳಿಗಾಗಿ ಕೆಂಪು  ಮತ್ತು ಹಳದಿ ಬಣ್ಣದ ದಿನಾಚರಣೆಯನ್ನು ಆಚರಿಸಲಾಯಿತು.

ಮಕ್ಕಳು ಕೆಂಪು ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪನ ಅಧ್ಯಕ್ಷ ಟಿ.ರಂಗಪ್ಪ, ಮುಖ್ಯೋಪಾಧ್ಯಾಯಿನಿ ಕಾಂತಿ ನಾಯಕ್, ಝರೀನಾ ಬಾಬುಲ್, ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿ ಜನಮನ ಸೂರೆಗೊಂಡರು.

Leave a Reply

comments

Related Articles

error: