ಕರ್ನಾಟಕ

ಬೆಳೆ ಸಮೀಕ್ಷೆ ದಾಖಲೀಕರಣದಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲೆ ಪ್ರಥಮ

ಹಾಸನ (ನ.3): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬೆಳೆ ಸಮೀಕ್ಷೆ ದಾಖಲೀಕರಣದಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲೆ ಪ್ರಥಮ ಸ್ಥಾನ ಪಡೆದು ಮೆಚ್ಚುಗೆ ಗಳಿಸಿದೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಮಾರ್ಗದರ್ಶನ ಹಾಗೂ ಸೂಚನೆಯಂತೆ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ನಿರಂತರವಾಗಿ ಕ್ಷೇತ್ರ ಮಟ್ಟದಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಶ್ರಮ ವಹಿಸುತ್ತಿರುವ ಪ್ರತಿಫಲ ಇದಾಗಿದೆ..

ಹಾಸನ ಜಿಲ್ಲೆಯಲ್ಲಿ ಒಟ್ಟು 2581 ಗ್ರಾಮಗಳಿದ್ದು ಅದರಲ್ಲಿ 14,79,786 ಭಾಗಗಳನ್ನು ಒಳಗೊಂಡಿದೆ. ಪ್ರತಿ ಸಿಬ್ಬಂದಿ 859 ಬೆಳೆ ಸಮೀಕ್ಷೆಗಾರರು ಪ್ರತಿದಿನಕ್ಕೆ ಸರಾಸರಿ 102.53 ರಂತೆ ಸಮೀಕ್ಷೆ ಮಾಡಿ ದತ್ತಾಂಶವನ್ನು ನಿಗಧಿತ ತಂತ್ರಾಂಶ ಬಳಸಿ ಅಪ್‍ಲೋಡ್ ಮಾಡುತ್ತಿದ್ದಾರೆ. ಇಲ್ಲಿಯವರೆಗೆ 4,09,035 ಪ್ಲಾಟ್ ಸರ್ವೆ ಕಾರ್ಯ ಪೂರ್ತಿಯಾಗಿದೆ ಹಾಗೂ ಈ ಸಾಧನೆಗಾಗಿ ಜಿಲ್ಲೆ ರಾಜ್ಯದಲ್ಲಿ ಅಗ್ರ ಸ್ಥಾನದಲ್ಲಿದೆ.

ಇದೇ ಪ್ರಗತಿ ಗತಿಯನ್ನು ಮುಂದುವರಿಸಿ ಮುಂದಿನ 5 ದಿನಗಳಲ್ಲಿ 2.5 ಲಕ್ಷ ಅಥವ ಅದಕ್ಕಿಂತ ಹೆಚ್ಚು ಪ್ಲಾಟ್‍ಗಳ ಬೆಳೆ ಸಮೀಕ್ಷೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸೂಚನೆ ನೀಡಿದ್ದಾರೆ.

ಎರಡನೇ ಸ್ಥಾನದಲ್ಲಿರುವ ತುಮಕೂರು ಜಿಲ್ಲೆಯಲ್ಲಿ ಒಟ್ಟು 2724 ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ಮಾಡಲಾಗುತ್ತದೆ. 16,89,964 ಪ್ಲಾಟ್‍ಗಳಿದ್ದು ಪ್ರತಿಯೊಬ್ಬ ಸಿಬ್ಬಂದಿ ಸರಾಸರಿ ಶೇ 81.54ರ ಸರಾಸರಿಯಂತೆ ಈವರೆಗೆ 2,83,310 ಪ್ಲಾಟ್‍ಗಳ ಸರ್ವೆ ಕಾರ್ಯ ಮುಗಿಸಿ ಅಪ್‍ಲೋಡ್ ಮಾಡಲಾಗುತ್ತಿದೆ. ಇತರೆ ಜಿಲ್ಲೆಗಳಿಗೆ ಹೊಲಿಸಿದರೆ ಹಾಸನ ಜಿಲ್ಲೆ ಬಾರಿ ಮುಂಚೂಣಿಯಲ್ಲಿದೆ ಸುಮಾರು ದುಪಟ್ಟು ಪ್ರಗತಿಯ ದಾಕಲೆಯನ್ನು ಗಮನಿಸಬಹುದು.

ಜಿಲ್ಲಾಧಿಕಾರಿಯಿಂದ ನಿರಂತರ ಮೇಲ್ವಿಚಾರಣೆ: ಬೆಳೆ ಸಮೀಕ್ಷೆ ದಾಖಲೀಕರಣ ಪ್ರಕ್ರಿಯೆಗೆ ಹೆಚ್ಚಿನ ಮುತುವರ್ಜಿವಹಿಸುತ್ತರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಪ್ರತಿದಿನ ರಾತ್ರಿ 7-9 ಗಂಟೆವರೆಗೆ ಕ್ಷೇತ್ರಮಟ್ಟದ ಪ್ರಗತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

ಪ್ರತಿದಿನ ರಾತ್ರಿ ಕಂದಾಯ ಇಲಾಖೆ ಅಧಿಕಾರಿ ಸಿಬ್ಬಂದಿಗಳಿಂದ ತಾಲ್ಲೂಕುವಾರು ಮಾಹಿತಿ ಪಡೆಯುತ್ತಿರುವ ಜಿಲ್ಲಾಧಿಕಾರಿ ಅವರು ಉತ್ತಮವಾಗಿ ಕೆಲಸ ಮಾಡುವವರನ್ನು ಪ್ರೇರೇಪಿಸುತ್ತಾ ಅಬಿನಂದನಾ ನುಡಿಗಳನ್ನಾಡುತ್ತಾರೆ ಕೆಲಸದಲ್ಲಿ ಹಿಂದೆ ಬಿದ್ದಿರುವವರನ್ನು ಎಚ್ಚರಿಸುತ್ತಾ ತ್ವರಿತವಾಗಿ ಹಾಗೂ ಲೋಪದೊಷಗಳಿಲ್ಲದೆ ಗುರಿ ಮುಗಿಸಲು ನಿರ್ದೇಶನ ನೀಡುತ್ತಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ನಿರಂತರವಾಗಿ ಅ 12 ರಿಂದ 21 ರವರೆಗೆ ಹಾಸನಾಂಬ ಜಾತ್ರ ಮಹೋತ್ಸವದ ಕಾರ್ಯದಲ್ಲಿದ್ದರು ನಂತರ ಸತತ ಕ್ಷೇತ್ರ ಕಾರ್ಯ ನಿರ್ವಹಿಸಿ ಉತ್ತಮ ಪ್ರಗತಿ ಸಾಧಿಸಿರುವುದು ಅಭಿನಂದನಾರ್ಹ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದ್ದಾರೆ.

ಮಹಿಳಾ ಸಿಬ್ಬಂದಿಗಳು ಸಹ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಹಳ್ಳಿ ಹಳ್ಳಿಗಳಿಗೆ ತೆರಳಿ ಹೊಲಗದ್ದೆಗಳಲ್ಲಿ ಇರುವ ಬೆಳೆಗಳ ಛಾಯಚಿತ್ರ ತೆಗೆದು ಸರ್ವೆ ನಂಬರ್ ಮಾಡಿ ನಿಗದಿತ ತಂತ್ರಂಶದಲ್ಲಿ ಅಪ್‍ಲೋಡ್ ಮಾಡುತ್ತಿರುವುದು ಮೆಚ್ಚುಗೆ ವಿಚಾರ ಎಂದು ಜಿಲ್ಲಾಧಿಕಾರಿ ಪ್ರಶಂಸಿಸಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: