ಮೈಸೂರು

ವಿಜಯಬ್ಯಾಂಕ್ ನಿಂದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ನಡಿಗೆ

ಮೈಸೂರು,ನ.3-ಕೇಂದ್ರೀಯ ಜಾಗೃತ ಆಯೋಗದ ನಿರ್ದೇಶಾನುಸಾರ ವಿಜಯ ಬ್ಯಾಂಕ್ ನ.4ರವರೆಗೆ ಜಾಗೃತಿ ಅರಿವು ಸಪ್ತಾಹವನ್ನು ಆಚರಿಸುತ್ತಿದೆ. ಸಾರ್ವಜನಿಕರಲ್ಲಿ ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸುವುದು ಇದರ ಪ್ರಮುಖ ಧ್ಯೇಯವಾಗಿದೆ.

ಅದರಂತೆ ವಿಜಯಬ್ಯಾಂಕ್ ಶುಕ್ರವಾರ ನಗರದಲ್ಲಿ ಭ್ರಷ್ಟಾಚಾರದ ವಿರುದ್ಧ ನಡಿಗೆ ಹಾಗೂ ಮಾನವ ಸರಪಳಿಯನ್ನು ಹಮ್ಮಿಕೊಂಡಿತ್ತು. 100ಕ್ಕೂ ಹೆಚ್ಚು ಸಿಬ್ಬಂದಿ ನಜರ್ ಬಾದ್ ವಿಜಯಬ್ಯಾಂಕಿನಿಂದ ಹಾರ್ಡಿಂಗ್ ಸರ್ಕಲ್ ವರೆಗೆ ಜಾಗೃತಿ ಜಾಥಾ ಹಮ್ಮಿಕೊಂಡು ಹಾರ್ಡಿಂಗ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.

ವಿಜಯಬ್ಯಾಂಕ್ ಹಲವಾರು ಕಾಲೇಜು ಮತ್ತು ಶಾಲೆಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಲ್ಲಿ ಕೂಡ ಭ್ರಷ್ಟಾಚಾರದ ವಿರುದ್ಧ ಅರಿವು ಮೂಡಿಸುತ್ತಿದೆ.

ಕ್ಷೇತ್ರೀಯ ಕಾರ್ಯಾಲಯದ ಕ್ಷೇತ್ರೀಯ ಪ್ರಬಂಧಕ ಎಸ್.ಕಾಂತರಾವ್ ಇತರರು ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)

 

 

Leave a Reply

comments

Related Articles

error: